Quantcast
Channel: Life – Rambling with Bellur
Viewing all articles
Browse latest Browse all 119

ಯಾರಿಗೆ ಯಾವ ಫಾಂಟ್ ಇಷ್ಟ?

$
0
0

ಯಾರಿಗೆ ಯಾವ ಫಾಂಟ್ ಇಷ್ಟ?

ಹೊರಗಡೆ ಸುತ್ತಾಡೋರ್ಗೆ ಪ್ರಿಯವಾದ ಫಾಂಟ್?
ವರ್ಡಾನ?
verdana

ಬಟ್ಟೆ ಒಗೆಯೋರ್ಗೆ ಪ್ರಿಯವಾದ ಫಾಂಟ್?
ಏರಿಯಲ್!
arial

ಪಂಜಾಬಿಗಳಿಗೆ ಪ್ರಿಯವಾದ ಫಾಂಟ್?
ಅರೋರ ಮತ್ತು ಗಿಲ್!
aurora & gill

ಭೂಮಿ ಮತ್ತು ನೀರನ್ನು ಪೂಜಿಸುವವರ ಪ್ರಿಯವಾದ ಫಾಂಟ್?
ಅವೆನೀರ್
avenir

ಸೂರ್ಯದೇವನನ್ನು ಪೂಜಿಸುವವರ ಪ್ರಿಯವಾದ ಫಾಂಟ್?
ಭಾಸ್ಕೆರ್ ವಿಲ್
baskerville

ಬೇರೆಯವರ ವಿಚಾರ ಮಾತಾಡೋರ್ ಪ್ರಿಯವಾದ ಫಾಂಟ್?
ಕಂಡಾರ
candara

ಶತಕ ಹೋಡೆಯುವವರ ಪ್ರಿಯವಾದ ಫಾಂಟ್?
ಸೆಂಚುರಿ
century

ತಮಾಷೆ ಇಷ್ಟಪಡದೆ ಇರೋರು ಇಷ್ಟ ಪಡೋ ಫಾಂಟ್?
ಕಾಮಿಕ್ ಸ್ಯಾನ್ಸ್
comic sans

ಇದ್ದಿದ್ದ್ ಇದ್ದಹಾಗೆ ಹೇಳೋರ್ ಇಷ್ಟ ಪಡೋ ಫಾಂಟ್?
ಫ್ರಾನ್ಕ್ ಲಿನ್
franklin

ಭವಿಷ್ಯದ ಕಡೆ ನೋಡುವವರ ನೆಚ್ಚಿನ ಫಂಟ್?
ಫ್ಯೂಚುರ
futura

ಗೌಡ್ರು ಇಷ್ಟ ಪಡೋ ಫಾಂಟ್?
ಗೌಡಿ
goudy

ಸಲ್ಮಾನ್ ಖಾನ್ ಅಭಿಮಾನಿಗಳ ನೆಚ್ಚಿನ ಫಂಟ್?
ಹ್ಯೂಮನ್
human

ಲೂಸಿಯ ಅಭಿಮಾನಿಗಳ ನೆಚ್ಚಿನ ಫಂಟ್?
ಲೂಸಿಡ
lucida

ಕನ್ನಡದ ಹಿರಿಯ ನಟಿಯರು ಇಷ್ಟ ಪಡಬಹುದಾದ ಫಾಂಟ್?
ಮಿಸ್ಟ್ರಲ್
mistral

ಬಹಳ ದುಃಖ ಅನುಭವಿಸಿರೋರ್ ಇಷ್ಟ ಪಡಬಹುದಾದ ಫಾಂಟ್?
ನೋವಾ ಸಾಲಿಡ್
nova solid

ಕೋಪಿಷ್ಟರ ನೆಚ್ಚಿನ ಫಾಂಟ್?
ರೇಜ್ ಇಟಲಿಕ್
rage italic

ಊರ್ ಸುತ್ತ ಬಾಲ ಅಲ್ಲಡಿಸೋ ನಾಯಿಗಳ ಪ್ರಿಯವಾದ ಫಾಂಟ್?
ವ್ಯಾಗ್ ರೌಂಡೆಡ್
vag rounded

ಆರಾಮ ಇಷ್ಟ ಪಡೋರ್ ನೆಚ್ಚಿನ ಫಾಂಟ್?
ಕಂಫರ್ಟ
comfortaa

ಪುಸ್ತಕ ಓದೋ ಆಂಟಿಗಳಿಗೆ ಈ ಫಾಂಟ್ ಫೇವರೇಟ್ – ಬೂಕ್ ಆಂಟಿಕ್ವ book antiqua

ಕಾಫಿ ಕುಡಿದು ಜೀವನ ಸಾಗಸ್ತಿರೋ ಕಷ್ಟಜೀವಿಗಳ ನೆಚ್ಚಿನ ಫಾಂಟ್?
ಆರ್ಡ್ವರ್ಕ್ ಕೆಫೆ
aardvark cafe

ಸಾಮರ್ಥ್ಯ ಇರೋರು ಬಳಸೋ ಫಾಂಟ್?
ಕ್ಯಾಲಿಬ್ರಿ
calibri

ಹೋಮ ಹವನ ಮಾಡೋರ್ ಬಳಸೋ ಫಾಂಟ್?
ತಹೋಮ
tahoma

ಕನ್ನಡಿಗರ ನೆಚ್ಚಿನ ಫಾಂಟ್?
ಕಸ್ತೂರಿ
kasturi

ಶಾಪ ಹಾಕೋರ್ ಬಳಸೋ ಫಾಂಟ್?
ಕರ್ಸಿವ್
cursive

ಹಣವಂತರಿಗೆ ಪ್ರಿಯವಾದ ಫಾಂಟ್?
ಬ್ಯಾಂಕ್ ಗಾತಿಕ್
bank gothic

ಪೋಸ್ಟಲ್ಲಿ ಕಳ್ಸದ್ರೆ ನಿಧಾನ ಅನ್ನೋರ್ ಉಪಯೋಗಿಸೋ ಫಾಂಟ್?
ಕೊರಿಯರ್
courier

ರವಿಚಂದ್ರನ್ ಬಳಸೋ ಫಾಂಟ್?
ಫ್ಯಾಂಟಸಿ ಮತ್ತು ವಿಂಗ್ ಡಿಂಗ್
fantasy & wingding

ಫ್ರೀಜ಼ರ್ ಕಂಪನಿಯೊಂದರ ನೆಚ್ಚಿನ ಫಾಂಟ್?
ರಾಕ್ ವೆಲ್
rockwell

ಹಣ್ಣು ತಿನ್ನೋರ್ ಇಷ್ಟಪಡೋ ಫಾಂಟ್?
ಫ್ರೂಟಿಗರ್
frutiger

ಹೆದಾರಿಗಳಲ್ಲೇ ಓಡಾಡೋರ್ ಇಷ್ಟಪಡೋ ಫಾಂಟ್?
ಹೈವೆ
highway

ಗಾಬ್ರಿ ಪಡದೆ ಇರೋರ್ ಮತ್ತು ಟೆನ್ನಿಸ್ ಆಟಗಾರ್ತಿ ಸಬಾಟಿನಿನ ಇಷ್ಟ ಪಡೋರು ಬಳಸೋ ಫಾಂಟ್?
ಗಾಬ್ರಿಯೋಲ
gabriyola

ಮುಚ್ಚು ಮರೆ ಇಲ್ಲದೆ ಇರೋರ್ ಬಳಸೋ ಫಾಂಟ್?
ಓಪನ್ ಟೈಪ್
open type

ಸತ್ಯವಂತರು ಇಷ್ಟ ಪಡೋ ಫಾಂಟ್?
ಟ್ರೂ ಟೈಪ್
true type

ನಮ್ಮ ನಡುವೆ ಇರೋ ತಮಿಳರಿಗೆ ಒಪ್ಪುವಂಥ ಫಾಂಟ್?
ಸೆರಿಫ್
serif

ಬುದ್ಧನಿಗೆ ಪ್ರಿಯವಾದ ಫಾಂಟ್?
ಗೋತಮ್
gotham

ತ್ಯಾಗರಾಜರನ್ನ ನೆನಪಿಸೋ ಫಾಮ್ಟ್?
ಟ್ರೋಜನ್ (ಇದನ್ನ ಟಿ.ರಾಜನ್ ಅಂತಲೂ ಓದಬಹುದಲ್ವಾ?)
trajan

ಶ್ರಮವಾದ ಕೆಲಸ ಮಾಡಿ ಮುಗಿಸಿದ ಮೇಲೆ ಉಪಯೋಗಿಸಬಹುದಾದ ಫಾಂಟ್?
ಅಬಾಡಿ
abadi

ಆಂಗ್ಲ ಪತ್ರಿಕೆ ಓದೋ ಅಲೆಮಾರಿಗಳ ನೆಚ್ಚಿನ ಫಾಂಟ್?
ಟೈಮ್ಸ್ ರೋಮನ್
times roman

ಹೊಸ ಪರಿಸ್ಥಿತಿಯನ್ನು “ಆಗಲೇ ಅನುಭವಿಸಿದ್ದೀವೇನೋ” ಅಂತ ಅನ್ನುವವರು ಉಪಯೋಗಿಸೋ ಫಾಂಟ್?
ಹಿಂದಿಯವರಿಗೆ “ಕೊಟ್ಟ್ ಹೋಗು” ಅನ್ನೋದಕ್ಕೆ ಈ ಫಾಂಟ್ ಬಳಸಬಹುದು!
ದೇಜಾವು
deja vu

“ರೋಜ಼್ ಗೊತ್ತಾ” ಅಂತ ಮಲಯಾಳಿಗಳನ್ನ ಈ ಫಾಂಟ್ ಮೂಲಕ ಕೇಳಬಹುದು!
ರೋಜ಼ರಿಯೊ
rosario

ಪುಂಡರು ಬಳಸಕ್ಕೆ ಲಾಯಕ್ಕಾದ ಫಾಂಟ್?
ಪೋಲಿ
poly

ಕೋರಮಂಗಲದವರ ನೆಚ್ಚಿನ ಫಾಂಟ್?
ಫೋರಂ
forum

ಹುಚ್ಚರಲ್ಲದವರ ನೆಚ್ಚಿನ ಫಾಂಟ್?
ತಿಕಲ್ ಸ್ಯಾನ್ಸ್
tikal sans

ಮಂಗಳೂರಿನವರಿಗೆ ಪ್ರಿಯವಾದ ಫಾಂಟ್?
ಯುಬುಂಟು
ubuntu

ಸುಮಾರಾಗಿ ಓದೋರಿಗೆ ಇಷ್ಟ ಆಗೋ ಫಾಂಟ್?
ಆವರೇಜ್
average



Viewing all articles
Browse latest Browse all 119

Trending Articles