ರಾಮಾಯಣ in a Capsule – 1
by Ramakrishna Bellur Shivaram
ಶ್ರವಣಕುಮಾರನ ಅಂತ್ಯಕ್ಕೆ ಕಾರಣ?
ದಶರಥ ಸರಿಯಾಗಿ ಶ್ರವಣ ಮಾಡದೇ ಇದ್ದದ್ದು.
ದಶರಥನಾದನು ಕೈಕೇಯಿಗೆ ಕೈಸೆರೆ.
ರಾಮನಿಗಾಯಿತು ಕಾಡೇ ಆಸರೆ.
ಕೈಕೇಯಿ ಹಠ ಬಿಡದೇ ಇದ್ದದ್ದೇ ತಪ್ಪು.
ರಾಮ ಹಠ್ ಬಿಟ್ಟಿದ್ದೇ ತಪ್ಪು.
ಸೀತೆ in ceylon. ರಾಮ is alone.
ಒಬ್ಬನಿಗೆ ಸರಿಯಾಗಿ ಎಷ್ಟು ತಲೆಗಳು ಸೇರಿವೇ ಅನ್ನೋದಲ್ಲ,
ಒಬ್ಬನ ಜೊತೆ ಎಷ್ಟು ತಲೆಗಳು ಸೇರಿವೇ ಅನ್ನೋದೇ ಮುಖ್ಯ.
***
ರಾಮಾಯಣ in a Capsule – 2
by Ramakrishna Bellur Shivaram
ರಾಮಾಯಣ in a Capsule – 4
by Ramakrishna Bellur Shivaram
Until she got liberation from Rama, life for Ahalya, was a hell ya.
ಗಧೆಯನ್ನು ಕೆಳಗಿಟ್ಟರೆ, ಅಂಗದ becomes Un-ಗಧ.
Actually, ರಾಮ ಆಂಜನೇಯನನ್ನು ಮೀಟ್ ಮಾಡಿದಾಗ ಶುರು ಆಗೋದು ‘ಬಾಲ’ ಕಾಂಡ.
ಶ್ಯಮಂತಕೋಪಾಖ್ಯಾನದಲ್ಲಿ ಕೃಷ್ಣನೇ ರಾಮನೆಂದು ತಿಳಿಯುವವರೆಗೂ ಅವ i.e. ಜಾಂಬವ, ಜಾಂಬವಂತನಾಗಿರಲಿಲ್ಲ, ಜಂಬವಂತನಾಗಿದ್ದ.
ಚಿತ್ರಗಳಲ್ಲಿ ನೋಡಿ. ರಾಮನ ಬಲ ಭಾಗಕ್ಕೆ ಇರೋದು ಹನುಮ. ಹನುಮನೇ ಮುಂದೆ ಭೀಮನ ಸ್ವರೂಪ. Therefore, ರಾಮ ಬಲ ಭೀಮ.
ರಾಮ-ಸೀತೆಯ ಮಕ್ಕಳ ಹೆಸರ ಅರ್ಥ?ಎಲ್ಲರೊಡನೆ ಪ್ರೀತಿಯಿಂದ ಇದ್ದರೆ, ಖುಷಿಯಾಗಿರಬಹುದು. ಲವ್ ಮಾಡಿ, ಕುಶ್ ಆಗಿರಿ.
ಒಂದ್ ಆಟದ ಸಾಮಾನು ಮುರಿದರೆ, ಇನ್ನೊಂದ್ ಸಿಗತ್ತೆ ಅನ್ನೋ ಮೆಸೇಜ್ ರಾಮಾಯಣದಲ್ಲೇ ಇದೆ. ಎಲ್ಲಿ? ಶಿವಧನುಸ್ಸು ಮುರಿದ. ವಿಷ್ಣು ಧನುಸ್ಸು ಪಡೆದ.
ಅನ್ಯರು ಬಿಲ್ಲು ಮುರಿಯಲಾಗದಿದ್ದಾಗ ವೀಕ್ಷಕರು ಹೇಳಿದ್ದು: Bow ಕಷ್ಟ ಐತೆ.
ರಾಮ ಬಿಲ್ಲು ಮುರಿದಾಗ ವೀಕ್ಷಕರು ಹೇಳಿದ್ದು: Piece, piece… Bow ಪಸಂದಾಗಿತ್ತು.
ಹಿಂದೆಲ್ಲ, ಫಂಕ್ಷನ್ ಆದಮೇಲೂ, ಮನೆಗೆ ಬಂದಿರೋ ಅತಿಥಿಗಳು, ದಿನಗಟ್ಟಲೆ ಹೊರಡ್ತಾನೇ ಇರ್ಲಿಲ್ಲ. ಇದು ಈಚಿನ ಬೆಳವಣಿಗೆ ಅಲ್ಲ. ರಾಮಾಯಣದಲ್ಲೇ ಈ ಬಿಹೇವಿಯರ್ ಇದೆ. ರಾಮನ ಪಟ್ಟಭಿಷೇಕ ಆದಮೇಲೆ, ಗೆಸ್ಟ್ ಯಾರೂ ಹೊರಡಲೇ ಇಲ್ವಂತೆ.
ನಾವೆಲ್ಲ ಕೆಲ ಸನ್ನಿವೇಶಗಳಲ್ಲಿ ‘ಅಯ್ಯೋ ರಾಮ’ ಅಂತ ಹೇಳ್ತೀವಿ. ಅದು ಮೊದ ಮೊದಲು I.O. ರಾಮ ಆಗಿತ್ತು. I.O. ಎಂದರೆ Ikshvaku’s Omnipotent ರಾಮ.
ಲಕ್ಷ್ಮಣನಿಗೆ ಹಠ ಮಾಡೋದು, ಹಟ್ ಮಾಡೋದು ಚೆನ್ನಾಗಿ ಕಲ್ತಿದ್ದ.
ಭರತ: ಭರದಿಂದ ರಥದಲ್ಲಿ ಓಡಾಡುತ್ತಿದವ.
ಸಂಪಾತಿಯ ವ್ಯಥೆ ಕೇಳಿದಾಗ, ರಾಮ ಮತ್ತು ವಾನರರು ತೋರಿಸಿದ್ದು? Sympathy.
ವನದಲ್ಲಿರುವ ನರ? ವಾನರ.
ಸಾಮಾನ್ಯವಾಗಿ, congested ಜಾಗಕ್ಕೆ ಕಿಷ್ಕಿಂದಾಪಟ್ಟಣ ಅಂತೀವಿ. ಆದರೆ ನಿಜವಾದ ಕಿಷ್ಕಿಂದೆ ಅಷ್ಟು ಜಾಗ ಈಗ ಸಿಕ್ಕರೆ, several REAL ಎಸ್ಟೇಟೆ ಕಟ್ಟಬಹುದೇನೋ!
Because she offered only berry, hence Sa-berry.
***
ರಾಮಾಯಣ in a Capsule – 5
by Ramakrishna Bellur Shivaram
ಪಾರ್ಟಿ ಬದ್ಲಾಯ್ಸೋದು ಈ ಕಾಲದ್ ಬೆಳವಣಿಗೆ ಏನಲ್ಲ. ಪುರಾಣಗಳಲ್ಲೇ ಉದಾಹರಣೆಗಳಿವೆ. ಅಮೃತ ಹಂಚೋವಾಗ ರಾಹು-ಕೇತು ಆಕಡೆಯಿಂದ ಈಕಡೆ ಬರ್ಲಿಲ್ವೇ? ವಿಭೀಷಣ ರಾಮನ್ ಪಾರ್ಟಿ ಸೇರ್ಲಿಲ್ವೆ. ಇನ್ ಮಾಬಾರ್ತ್ದಲ್ಲಂತೂ ಬೇಜ಼ಾನ್ ಎಗ್ಸ್ಯಾಂಪಲ್ಲಿವೆ ಬಿಡಿ.
***
ಅಮ್ಮ ಸುಮ್ನಿದ್ರೂ ಚಿಕ್ಕಮ್ಮ ಸುಮ್ನಿರಲ್ಲಾಂತಾ ರಾಮನಿಗಿಂತ ಇನ್ಯಾರಿಗ್ಗೊತ್ತು ಹೇಳಿ?
***
ಇರೋದನ್ನ ವಾಪಸ್ ಹಂಚದ್ರೆ, ಹಂಚ್ ಬ್ಯಾಕ್ ಅನ್ಬೋದು. ಆದ್ರೆ ಮಂಥರೆ ಹಂಚ್ ಬ್ಯಾಕ್ ಆದ್ರೂ ಡೋನ್ಟ್ ಹಂಚ್ ಬ್ಯಾಕ್ ಅಂತ್ಲೇ ಹೇಳಿದ್ದು.
***
ಕೈಕೇಯಿ ಜೊತೆ ಮಂಥರೆ. ಅಮ್ಮನ ಜೊತೆ ಚಿಕ್ಕಮ್ಮ.
***
When read as it is, the below lines are related to Ramayana.
When you omit the words in brackets and read, it is related to the political situation in the neighbouring state.
(ದಶರಥನ) ಹಾಲಂಥ ಮನಸು ಒಡೆಯಲು
ಬಳಸಿ (ಕೈಕೇಯಿ ಎಂಬ) ನಿಂಬೆಯ ಸಸಿ ಕಲಾಪೂರ್ಣವಾಗಿ
(ಮಂಥರೆ) ಹುಳಿ ಹಿಂಡಿದರೆ
(ಅಯೋಧ್ಯೆಯ) ಖುಷಿಯ ಪನ್ನೀರು ಸೆಲ್ವನಾಥ
ರಾಮನ ಮಡದಿಯ ಕಣ್ಣೀರಾಗಿ
ಮನಸೆಂಬ ತಳಮಳನಾಡನ್ನು ಕಲಕಿತು.
