ನಾನು: ಏನ್ ಸುಬ್ಬಮ್ಮ್ನೋರೆ, ಸೋಮ್ವಾರ ಏಕಾದಶಿ. ಎಲ್ಲ ರೆಡೀನ?
ಸುಬ್ಬಮ್ಮನೋರು: ಏನ್ ಏಕಾದಶಿನೋ ಏನೊ…ನನ್ ಕಷ್ಟ ನನಗೆ.
ಅವರ ಕಷ್ಟಾನ ಇಲ್ಲಿ ಬರ್ದಿದ್ದೀನಿ…ದಯಮಾಡಿ ಓದಿ!
ಸುಬ್ಬಮ್ಮನ ಏಕಾದಶಿ ಇಂದು
ರಚನೆ: ರಾಮಕೃಷ್ಣ ಬೆಳ್ಳೂರು
ಆಚೆ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ
ಎಲ್ಲೊ ಸ್ವಲ್ಪ ತಿಂತಾರಷ್ಟೆ
ಚಾಟ್ಸು, ನೂಡಲ್ಸು, ಪಾಸ್ತ
ಮೂರೋ ನಾಲ್ಕೋ ಕಲ್ಲಂಗಡಿ ಹಣ್ಣು
ಸ್ವಲ್ಪ ಭೇಲ್ ಪಾಪ್ ಕಾರ್ನು
ಘಂಟೆಗೆ ಡಜ಼ನ್ನು ಸ್ಟ್ರಾಬೆರಿಹಣ್ಣು
ಆಗಾಗ ಒಂದೊಂದು ಬೇಬಿ ಕಾರ್ನು
ಮಧ್ಯಾನಕ್ಕೆಲ್ಲ ನುಚ್ಚಿನುಂಡೆ
ಕಾಂಗ್ರೆಸ್ ಹಾಕಿರೊ ಉಸಲಿ
ಎಲ್ಲೋ ಸ್ವಲ್ಪ ಬೆಣ್ಣೆ ದೋಸೆ ಟೇಸ್ಟಿಗೆ
ಬೆಣ್ಣೆ ಖಂಡಿತಾ ಅಸಲಿ
ರಾತ್ರಿಗೆ ಪಾಪ ಫುಡ್ ಸ್ಟ್ರೀಟೆ ಗತಿ
ಒಂದ್ ಲೋಟದ ತುಂಬಾ ಲಸ್ಸಿ
ಪಕ್ಕದಲ್ಲಿರೋ ಲಸ್ಸಿ ಬಾರಲಿ
ಸುಬ್ಬಮ್ಮ ತುಂಬ ಫಸ್ಸಿ
