ಪಿತೃ ಪಕ್ಷ ಮತ್ತು ವ್ಯಾಲೆಂಟೈನ್ ಡೇ
ಕರ್ತೃ : ರಾಮಕೃಷ್ಣ ಬೆಳ್ಳೂರು
೧) ಒಂದೆಡೆ ವಿ-ಡೇ. ಇನ್ನೊಂದೆಡೆ ವಡೆ.
೨) ಎರಡರಲ್ಲೂ ಪಕ್ಷಿಗಳಿಗೆ ಮಹತ್ವ. ಕಾಗೆ. ಡವ್.
೩) ವಾರವೆಲ್ಲ ಆಚರಿಸಿ ೧೪ಕ್ಕೆ ಅದು ಮುಗಿದ್ರೆ, ೧೪ ದಿವಸದಲ್ಲಿ ಯಾವತ್ತಾದ್ರೂ ಇದನ್ನ ಮಾಡಬಹುದು.
೪) ಭಕ್ಷ್ಯಗಳನ್ನ ಕರಿದು (ವಡೆ, ಸಜ್ಜಪ್ಪ) ಪಿತೃಗಳಿಗೆ ಕೊಡ್ತೀವಿ. ವ್ಯಾಲೆಂಟೈನ್-ನ ಕರೆದು ಭಕ್ಷ್ಯಗಳನ್ನು (ಐಸ್ ಕ್ರೀಮ್, ಚಾಕಲೇಟ್ ಇತ್ಯಾದಿ) ಕೊಡ್ತೀವಿ.
೫) ಅಲ್ಲಿ FUNERAL ಆಗಿರ್ಬೇಕು. ಇಲ್ಲಿ FUN REAL ಆಗಿರ್ಬೇಕು.
೬) ಅಲ್ಲಿ ಹುಡ್ಗ ಹುಡುಗಿ ಒಬರಿಗೊಬ್ರು ಕಾಳು ಹಾಕ್ಕೋತಾರೆ. ಇಲ್ಲಿ ಬರೀ ಅಕ್ಕಿ ಕಾಳೆ.
೭) ಅಲ್ಲಿ stuffed item ಅಂದ್ರೆ ಸಜ್ಜಪ್ಪ ಇತ್ಯಾದಿ. ಇಲ್ಲಿ stuffed item ಅಂದ್ರೆ soft toys ಇತ್ಯಾದಿ.
೮) ಅಲ್ಲಿ ಬೇರು. ಇಲ್ಲಿ ಟೆಡ್ಡಿ ಬೇರು.
೯) ಅದು ಆದಿ ಕಾಲದಿಂದಲೂ ನಡೆದುಕೊಂಡು ಬರ್ತಿರೋ ಕರ್ಮ. ಇದು ಈ ನಡುವೆ ಶುರು ಆಗಿರೋ ಕರ್ಮ.
೧೦) ಪಿತೃ ಪಕ್ಷ ಆಗಲಿ, ವ್ಯಾಲೆಂಟೈನ್ಸ್ ಡೇ ಆಗಲಿ, ಕಾಗೆ ಹಾರಿಸಬಾರ್ದು.
೧೧) ಅಲ್ಲಿ ರವೇ undae. ಇಲ್ಲಿ any sundae
೧೨) ಪಿತೃಗಳಿಗೆ ಅರ್ಘ್ಯ. ವ್ಯಾಲೆಂಟೈನ್ ಸಿಕ್ರೆ, ಅನರ್ಘ್ಯ!
೧೩) ಅಲ್ಲಿ ಪವಿತ್ರ (ದರ್ಬೆ) ಇರ್ಬೇಕು, ಇಲ್ಲಿ ಪವಿತ್ರವಾಗಿರ್ಬೇಕು.
೧೪) ಅಲ್ಲಿ ತಿಲದಾನ ಉತ್ತಮ. ಇಲ್ಲಿ ಸಮಾಧಾನ ಉತ್ತಮ.
ಸಂತ ವಾಲೆಂಟೈನ್ ಮತ್ತು ಪಿತೃಗಳ ಆಶೀರ್ವಾದ ಎಲ್ಲರಿಗೂ ಲಭಿಸಲಿ!