
ಟಿ ವಿ ಆಂಟೆನಾ ಮತ್ತು ಡಿಶ್ : ಒಂದು ಹರಟೆ
ರಾಂಕಿ ಬೆಳ್ಳೂರ್ ಊಹೆಗೆ ಸಿಲುಕಿದ್ದು
ಮನೆಯೋರೆಲ್ಲಾ ಸ್ವರ್ಗ ಸೇರಿದ್ರೂ ಮನೆ ಮೇಲಿರೋ ಹಳೇ ಟಿ ವಿ ಆಂಟೆನಾ ಇನ್ನೂ ನೇತಾಡ್ತಿತ್ತು… ಅದರ ಪಕ್ಕದಲ್ಲಿ ಒಂದು ‘ಡಿಶ್’, ಆಕಾಶಾನೇ ದಿಟ್ಟಿಸಿ ನೋಡ್ತಿತ್ತು. ಆಗ ನಡೆದ ಸಂಭಾಷಣೆಯ ತುಣುಕು:
ಆಂಟೆನಾ: ಯೇನ್ ಸದಾಕಾಲ ಮಳೆ ಬರತ್ತಾ ಅಂತ ರೈತರು ಆಕಾಶ ನೋಡೋ ಹಾಗೇ, ನೀನೂ ಮೇಲೆ ನೋಡ್ತಿರ್ಥ್ಯಲ್ಲೋ…ಈ ಕಡೆ ತಿರುಗಿ ಮಾತಾಡಿದ್ರೆ…ಸಿಗ್ನಲ್ ಬಿದ್ ಹೋಗತ್ತಾ?
ಡಿಶ್: ಅದು ಹಾಗಲ್ಲ ಆಂಟ್ ಅಣ್ಣ …ಅಲ್ಲ ಆಂಟೆನಾ … ನಮಗೆ ಹುಟ್ಟಿನಿಂದ ‘ಲುಕ್ ಅಪ್ ಟು ಅಧರ್ಸ್’ …ಅಂತ ಹೇಳಿಕೊಟ್ಟಿದ್ದಾರೆ…ಅದಕ್ಕೆ ಹಾಗೆ…
ಆಂಟೆನಾ: ಮಣ್ಣಾನ್ಗಟ್ಟಿ…ಹುಟ್ಟಿನಿಂದ ‘ಲುಕ್ ಅಪ್’..ಅಲ್ಲ..ನೀನು ಹುಟ್ಟಿನಿಂದ ಬಾಂಡ್ಲಿ ಕಣೋ…ನನಗೇನಾದ್ರೂ ಅಡುಗೆ ಮಾಡಕ್ ಬಂದಿದ್ರೆ, ವಾಂಗೀಭಾತ್ ಕಲಿಸಿಬಿಡ್ತಿದ್ದೆ ನಿನ್ನ ಒಳಗೆ… ಒಂದ್ ಕಾಗೇನೋ ಪಾರಿವಾಳನೋ ಕೊರಕ್ಕೂ ಆಗಲ್ಲ ನಿನ್ ಮೇಲೆ…ನನ್ ಮೇಲೆ ಎಷ್ಟೋತ್ತು ಕೂತು ಆಲೋಚನೆಗಳು ಮಾಡತಾವೆ ಗೊತ್ತಾ ಅವು… ವರ್ಷಗಳ ಅನುಭವದಿಂದ ಐ ಕ್ಯಾನ್ ಕ್ಯಾಚ್ ದಿ ಬರ್ಡ್ಸ್ ಮೈಂಡ್ ಸಿಗ್ನಲ್ಸ್ ಟೂ !
ಡಿಶ್: ನಿನ್ ಕಾಲದಲ್ಲಿ ಒಳ್ಳೆ ರಾಮಾಯಣ-ಮಹಾಭಾರತ ಬರೋವಾಗಲೋ, ಇಂಡಿಯಾ ಪಾಕಿಸ್ತಾನ ಮ್ಯಾಚ್ ನಡೆಯೋ ಟೈಮ್-ಗೋ ಸಿಗ್ನಲ್ ಕ್ಯಾಚ್ ಮಾಡದೇ ಜನರನ್ನ ಗೋಳು ಹುಯ್ಕೋತಿದ್ಯಂತೆ ?! ಎಂಥ ಸ್ಯಾಡಿಸ್ಟ್ ನೀನು !
ಆಂಟೆನಾ: ಇನ್ನೇನ್ ಮತ್ತೆ… ಜನರು ನನ್ ಮೇಲೆ ಕಾಚ ಬನೀನ್ ಎಲ್ಲ ಹರವಾಕ್ ಬಿಡೋರು… ನಾ ಬಿಡ್ತೀನಾ?! ಸಾಲದ್ದಕ್ಕೆ, ನನ್ ವಯಸ್ಸೇನೂ…ಅದಕ್ಕೆ ಬೆಲೆ ಕೊಡದೆ..ಯಾವ್ದೋ ಚಿಳ್ಟಾರೀನ್ ಹತ್ತಿಸಿ ನನ್ನ ತಲೇನ ಎತ್ಎತ್ಲಾಗೋ ತಿರಿಗ್ಸಿ…’ಬಂತಾ ಬಂತಾ ‘ ಅಂತಾ ಕೂಗೋದ್ ಬೇರೆ !
ಡಿಶ್: ಏನೇ ಹೇಳು…ನಮ್ಮನ್ನ ಮನೆಯೋರಹಾಗೆ ಜನ ಯಾವತ್ತೂ ಸ್ವೀಕರಿಸಲಿಲ್ಲ…ಹೊರಗಿನೊರ್ ಹಾಗೆ ಮನೆ ಹೊರಗೆ ಇಟ್ ಬಿಟ್ರು … ಅದೇ ಆ ಸೆಟ್ ಟಾಪ್ ಬಾಕ್ಸು… ಈಚೆಗೆ ಬಂದಿರೋ ಮಳ್ಳಿ… ಮನೆ ಒಳಗೇ ಸೇರ್ಕೊಂಡಿತು…
ಆಂಟೆನಾ: ಮನೆ ಒಳಗೇನು…ರೂಮ್ ಒಳಗೂ ನ್ಯೂಗ್ಬಿಡ್ತು…
ಡಿಶ್ : ಅಯ್ಯೋ..ಅದರ ಕಾಲಾನೂ ಮುಗೀತು.. ಅದನ್ನೂ ಹೊರ್ಗ್ ಹಾಕಿದ್ ನೋಡಿದೀನಿ… ಈಗೇನೋ ಫೈರ್ ಸ್ಟಿಕ್ ಅಂತ ಹೊಸಬಳು ಬಂದಿದ್ದಾಳಂತೆ …ಅವಳ ರಾಜ್ಯಭಾರ ಶುರು ಆಗಿದೆ…ಗೊತ್ತಾ ?
ಆಂಟೆನಾ: ಅಯ್ಯೋ ಬಿಡು… ನಮ್ದು ಮುಗಿದ್ ಹೋದ್ ಕಾಲ… ಮನೆ ಹೋಗು ಅಂತಿದೆ…ಗುಜರಿ ಅಂಗಡಿ ಬಾ ಅಂತಿದೆ.. ಮನುಷ್ಯಂಗೆ ಇನ್ನೆಷ್ಟು ಮುಂದ್ ವರೆಯೋ ಆಸೇನೋ ಏನೋ… ಫೈರ್ ಸ್ಟಿಕ್ ಇರ್ಲಿ… ಮ್ಯಾಚ್ ಸ್ಟಿಕ್ ಕೊಡು… ಒಂದ್ ಸ್ಮಾಲ್ ಎಳೀತೀನಿ…